ಶಿವನ ತ್ರೈಯತ್ವ (ತ್ರಿಶೂಲ)

ಶಿವನ ತ್ರೈಯತ್ವ (ತ್ರಿಶೂಲ) 

- ಡಾ. ಎ ಎಂ ನಾಗೇಶ್

ಸಾವಿರಾರು ವರ್ಷಗಳ ಹಿಂದೆ ಮಾನವ ಭಯದ ಜೀವಿ. ಆದುದರಿಂದ ಮನುಷ್ಯರು ಸಾಂಘಿಕ ಜೀವನವನ್ನು ನಡೆಸುತ್ತಿದ್ದರು. ಅಹಾರ ಹುಡುಕಿ ಶೇಕರಿಸುವುದೇ ಇವರ ಕೆಲಸವಾಗಿತ್ತು. ಗುಂಪು ಗುಂಪಾಗಿ ಗುಳೆ ಅಥವ ವಲಸೆ ಹೋಗುತ್ತಿದ್ದರು. ಈ ಕಾರಣದಿಂದ ಭಯ ಕಮ್ಮಿ ಆಗಿ ನಾಯಕತ್ವದ ಹುಟ್ಟು ಮತ್ತು ಹೋರಾಟದ ಗುಣಗಳು ಬಲವಾಗಿ ಬೆಳಯುತ್ತಾ ಸಾಗಿತ್ತು. ನಾಯಕ ಬಲಿಷ್ಠನಾದನು. ಆವನ ಮಾತೇ ಶ್ರೇಷ್ಠ ಮತ್ತು ನಂಬಿಕೆಗೆ ಅರ್ಹ ಎಂಬುದನ್ನು  ತನ್ನ ಅನುಯಾಯಿಗಳಿಗೆ ಹೇರುತ್ತಾ ಬಂದನು. ತನ್ನ ಆಜ್ಞೆಗಳನ್ನು ಪಾಲಿಸದಿದ್ದರೆ ತನ್ನ ಅನುಯಾಯಿಗಳನ್ನು ಶಿಕ್ಷೆಗೆ ಒಳಪಡಿಸುತ್ತಿದ್ದನು. ಮತ್ತೆ ಸಾಮಾನ್ಯ ಮಾನವ ಭಯದಲ್ಲೇ ಬದುಕುವಂತೆ ಮಾಡಿತ್ತು. ನಾಯಕರು ಚಕ್ರವರ್ತಿಗಳಾದರು. ಇವರ ಭ್ರಮೆಗಳು ದೇವರಾದವು. ಅವರ ಆಚಾರ ಸಂಸ್ಕೃತಿ ಆಯಿತು. ಆಗ ಮಾನವರಿಗೆ ವಿಚಾರ ಮಾಡುವ ಹಕ್ಕು ಇರಲಿಲ್ಲ. ವಿಚಾರವಂತರನ್ನು ಗಲ್ಲಿಗೆ ಏರಿಸುತ್ತಿದ್ದರು. ಸಂಸ್ಕೃತಿಗೆ ಧರ್ಮದ ಲೇಪನವನ್ನು ಮಾಡಿದರು. ಧರ್ಮಗಳು ಧರ್ಮಾಂಧತೆಗಳಾದವು. ಧರ್ಮ ಮಾನವರನ್ನು ವಿಭಜಿಸಿ ಧಾರುಣ ನರಮೇಧಗಳಿಗೆ ಕಾರಣವಾಯಿತು. ನಮ್ಮ ಮೂರ್ಖತನವೂ ಅಥವ ಹೇಯತನವೂ ಇಂದೂ ಸಹ 21 ನೇ ಶತಮಾನದಲ್ಲಿ ಕೂಡ ಇಂತಹ ನರಮೇಧಗಳು ನಿಂತಿಲ್ಲ. ಧರ್ಮ ನಮ್ಮ ಸೃಷ್ಟಿ. ನಾವು ಧರ್ಮಗಳನ್ನು ಕುರಿಗಳಂತೆ ಹಿಂಬಾಲಿಸುತ್ತಾ ಬಂದಿದ್ದೇವೆ. ಈಗ ನಾವೆಲ್ಲಾ ಧರ್ಮಗಳಿಗೆ ಹರಿಕೆ ಕುರಿಗಳಾಗಿದ್ದೇವೆ.  

ಒಮ್ಮೆ ನನ್ನ ಕ್ಲಿನಿಕ್ ಕೊಠಡಿಗೆ ತಾಯಿ ಮಗ ಸಮಾಲೋಚನೆಗೆ ಬಂದರು. ಇವರಿಬ್ಬರ ಹಣೆಯ ಮೇಲೆ ವಿಭೂತಿಯ ನಾಮ ರಾರಾಜಿಸುತಿತ್ತು. ಈಶ್ವರನಿಗೆ ಪ್ರಿಯವಾದ ನಾಮ. ಈಶ್ವರ ಮೂರು ಲೋಕಗಳ ಒಡೆಯ. ಎಲ್ಲರಿಗೂ ತಿಳಿದಿರುವ ವಿಷಯ. ಈ ಚಿನ್ಹೆ ಈಶ್ವರನ ತ್ರಿಶೂಲಕ್ಕೆ ಹೋಲಿಸಬಹುದೇ? ತ್ರಿಶೂಲವನ್ನು ಆಯುಧ ರೂಪದಲ್ಲಿ ನೋಡುವದು ಬೇಡ. ನನ್ನ ವಿವರಣೆ ವೈಯಕ್ತಿಕ, ಅಪಾರ್ಥ ಬೇಡ. ಪ್ರಪಂಚಾದ್ಯಂತ ಎಡ ಮತ್ತು ಬಲ ಪಂಥಿಯರಿದ್ದಾರೆ. ನಮಗೆ ಎಡ ಮತ್ತು ಬಲ ಇದ್ದ ಹಾಗೆ. ಜೀವನದಲ್ಲಿ ಬಲ ಕೈಗೆ ಪ್ರಾಮುಖ್ಯ ಕೊಟ್ಟ ಹಾಗೆ ಎಡ ಕೈಗೆ ಕೊಡುವುದಿಲ್ಲ. ಪಾಪ ಎಡ ಕೈ ಏನು ಮಾಡಿತ್ತು? ಬ್ರಾಹ್ಮಣಿಕೆಯು ಎಡ ಕೈಯನ್ನು ಯಾವುದೇ ಶುಭ ಸಂದರ್ಭದಲ್ಲಿ ಉಪಯೋಗಿಸಬಾರದು ಎಂದು ಹೇಳುತ್ತಾ ಬಂದಿದೆ. ಆದರೇ ಈ ಕೈ ನ ತ್ಯಾಗ ನಾವು ಮರೆಯುವಹಾಗಿಲ್ಲ. ಯಾಕೆ? ಸಹಸ್ರಾರು ವರ್ಷಗಳ ಹಿಂದೆ ಮಾನವನು ತನ್ನ ಬಲ ಕೈಯನ್ನು ಊಟ ಮಾಡಲು ಮತ್ತು ಬಲ ಪ್ರಯೋಗಕ್ಕೆ ಮಾತ್ರ ಸೀಮಿತಗೊಲಿಸಿದ್ದ. ಎಡ ಕೈಯಿಂದ ಮಲ ವಿಸರ್ಜಿಸುವ ಗುದದ್ವಾರ ಸ್ವಚ್ಚತೆಯನ್ನು ಮಾಡುವ ಕ್ರಿಯೆಯನ್ನು ಮಾಡುತ್ತಾ ಬಂದಿದ್ದಾನೆ. ಈ ಕ್ರಿಯೆಗಳು ನಮ್ಮ ಜೀವ ತಂತುಗಳಲ್ಲಿ ಗೂಢಲಿಪೀಕರಣವಾಗಿ ಆನಾದಿ ಕಾಲದಿಂದ ಬಂದಿದೆ. ನಮ್ಮ ಆರೋಗ್ಯವನ್ನು ಕಾಪಾಡಿದ ಈ ಕೈಗೆ ಯಾಕೆ ಕೆಟ್ಟ ಹಣೆ ಪಟ್ಟಿ? 

ತ್ರಿಶೂಲ ಎಂದೂ ಎಡ ಮತ್ತು ಬಲ ಏಂದು ಹೇಳುವುದಿಲ್ಲ. ಎರಡೂ ಸಮಾನಾಂತರ. ತ್ರಿಶೂಲದ ಮಧ್ಯ ಭಾಗ ಎತ್ತರವಾಗಿ ಇದ್ದು ಮಾನವನನ್ನು ಸರಿ ಸಮಾನವಾಗಿ ನಿಲ್ಲಲು ಹೇಳುವ ಸಂಕೇತವಾಗಿ ಇದೆ. ನಮ್ಮ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಪ್ರಪಂಚಾದ್ಯಂತ ಎರಡು ವಿಚಾರ ಧಾರೆಗಳು ಇವೆ. ಎಡ ಮತ್ತು ಬಲ. ತೆಗೆದುಕೊಳ್ಳುವುದು ಬಿಡುವುದು ನಮ್ಮ ನಮ್ಮ ಚಿತ್ತ ಅಥವ ಬುದ್ಧಿಗೆ ಬಿಟ್ಟಿದ್ದು. ಈ ವಿಚಾರಗಳನ್ನು ನಮ್ಮ ಮೆದುಳಿನಲ್ಲಿ ಸಂಸ್ಕರಿಸಿ ನೋಡಬೇಕು. ತ್ರಿಶೂಲವನ್ನು ಆಯುಧವಾಗಿ ನೋಡದೆ ಮಾನವೀಯತೆಯ ದೃಷ್ಟಿಯಲ್ಲಿ ನೋಡೋಣ. 

ಹಿಂದು ಸಂಪ್ರದಾಯದ ಪ್ರಕಾರ ಮೂವತ್ತಮೂರು ಕೋಟಿ ದೇವಾನು ದೇವತೆಗಳು ಇದ್ದಾರೆನ್ನುವ ಉಲ್ಲೇಖನ ಇದೆ. ಇದರ ಬಗ್ಗೆ ಸಾಮಾನ್ಯ ಬೆಳಕು ಚೆಲ್ಲುವ ಪ್ರಯತ್ನ ನನ್ನದು. ನಮ್ಮ ಶುಭ ಸಂದರ್ಭಗಳಲ್ಲಿ ನೂರಾ ಒಂದು ಅಥವ ಸಾವಿರದ ಒಂದು ರೂಪಾಯಿ ಕಾಣಿಕೆ ನೀಡುವ ಅಭ್ಯಾಸ ಇದೆ. ಆನಾದಿ ಕಾಲದಲ್ಲಿ ಹಣವಿರಲಿಲ್ಲ. ಕಾಣಿಕೆಯನ್ನು ವಸ್ತುವಿನ ರೂಪದಲ್ಲಿ ಹಣವಂತರು ಬ್ರಾಹ್ಮಣರಿಗೆ ಕೊಡುತ್ತಿದ್ದರು. ಪ್ರಪಂಚಾದ್ಯಂತ ಇಷ್ಟೇ ವಸ್ತುಗಳು ಇವೆ ಎಂದು ಹೇಳಲು ಸಾಧ್ಯವಿಲ್ಲ. ಅಂದಾಜು ಮೂವತ್ತಮೂರು ಕೋಟಿ ಒಂದು ವಸ್ತು ಇವೆ ಅಂದುಕೂಳ್ಳೋಣ. ಈಗ ವಸ್ತು ವಸ್ತುಗಳ ನಡುವೆ ಆಗುವ ಸಂವೇದನಾಶೀಲ ಕೆಲಸವೇ ಒಂದು ದೇವರು. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ತಾನು ಓದುವಾಗ ಪುಸ್ತಕಗಳು, ಕಾಗದ ಹಾಳೆಗಳು, ಜ್ಯಾಮಿಟ್ರಿ ಬಾಕ್ಸ, ಎರೇಸರ್, ಖುರ್ಚಿ, ಟೇಬಲ್ ಇತ್ಯಾದಿ ವಸ್ತುಗಳು ಇರಬೇಕಲ್ಲವೇ. ಓದುವಂತಹವನಿಗೆ ಓದುವುದೇ ದೈವ ಸಮಾನ. ಪರೀಕ್ಷೆ ದೇವತಾ ಕಾರ್ಯವಾದರೆ ಇಲ್ಲಿ ಹೇಳಿರುವ ವಸ್ತುಗಳು ನೈವೇದ್ಯ, ಕುಂಕುಮ, ಹರಿಶಿನ, ಮಂಗಳಾರತಿ ಇತ್ಯಾದಿ. ವಿದ್ಯಾರ್ಥಿ ಮತ್ತು ಪುಸ್ತಕದ ನಡುವೆ ಆಗುವ ವಿದ್ಯಾರ್ಜನೆಯ ಕಾರ್ಯ ಒಂದು ದೇವರು. ಹೀಗೆ ಪೆನ್ಸಿಲ್ ಮತ್ತು ಹಾಳೆಯ ಮಧ್ಯೆ, ವಿದ್ಯಾರ್ಥಿ ಮತ್ತು ಖುರ್ಚಿಯ ನಡುವೆ ಸಂಬಂಧಗಳೇ ದೇವರುಗಳು. ಈ ವಿಶ್ವದಲ್ಲಿ ಇಂತಹ ಅನುಬಂಧಗಳು ಅದೆಷ್ಟೋ, ಎಣಿಸಲು ಸಾಧ್ಯವೇ? ಹಿಂದು, ಇಸ್ಲಾಂ, ಬೌದ್ಧ, ಜೈನ, ಕ್ರೈಸ್ತ ಧರ್ಮಗಳ  ಮೇಲಲ್ಲದೆ ಈ ವಿಶ್ವದಲ್ಲಿ ಅಸಂಖ್ಯ ವಸ್ತುಗಳು ಇರುವದರ ಕಡೆ ನಮ್ಮ ಗಮನವನ್ನು ಹರಿಸಬೇಕು. ಈ ವಸ್ತುಗಳ ನಡುವೆ ಆಗುವ ಸಂಪರ್ಕ, ಸಂವಹನ ಮತ್ತು ಹೊಂದಾಣಿಕೆಗಳೇ ದೈವ ಸಮಾನ ಅಥವ ದೇವತೆಗಳು. 

Thrishul's three pointers are "appetite for questioning, thirst for knowing and energy for following". Three psycho social instruments like effort, patience and practice are essential triology of Lord Shiva.....

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು