ಹಾಡ್ಲಹಳ್ಳಿ ಗ್ರಾಮದ ತೊಡಮನಹರೆ ನಿವಾಸಿಗಳಿಗೆ ವಂಚನೆ

ಹಾಡ್ಲಹಳ್ಳಿ ಗ್ರಾಮದ ತೊಡಮನಹರೆ ನಿವಾಸಿಗಳಿಗೆ ವಂಚನೆ

ಮಂಜೂರಾದ ರಸ್ತೆ ಬೇರೆಡೆ ಕಾಮಗಾರಿ ಆರೋಪ, ಆಕ್ರೋಶ

 ಸಕಲೇಶಪುರ : ತೊಡಮನಹರೆಗೆ ಹೋಗುವ ದಾರಿಯಲ್ಲಿ ಆಗಬೇಕಿದ್ದ ನೂರು ಮೀಟರಿನ ರಸ್ತೆಯನ್ನು ಪ್ರಭಾವಕ್ಕೊಳಗಾಗಿ ಹೆತ್ತೂರು ಗ್ರಾಮದ ಜಾಗದಲ್ಲಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಹಾಡ್ಲಹಳ್ಳಿ ಗ್ರಾಮದ ತೊಡಮನಹರೆ ನಿವಾಸಿಗಳು ತಾಲೂಕು ಪಂಚಾಯತ್ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದರು.
 ತಾಲೂಕಿನ ಹೆತ್ತೂರು ಹೋಬಳಿ  ಹಾಡ್ಲಹಳ್ಳಿ ಗ್ರಾಮದ  ತೊಡಮನಹರೆಯಲ್ಲಿರುವ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ  ವಂಚಿತವಾಗಿದ್ದಾರೆ.
ಬ್ರಿಟಿಷರ ಕಾಲದಿಂದ ತೊಡಮನಹರೆ ಯಲ್ಲಿ  ನೆಲೆಸಿರುವ ಗ್ರಾಮಸ್ಥರು ಆ ಗ್ರಾಮದಲ್ಲಿ ರಸ್ತೆ ಆಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಕಲ್ಪಿಸದ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಎಷ್ಟು ಬಾರಿ ಶಾಸಕರಿಗೆ ಮನವಿ ಮಾಡಿದರು ಶಾಸಕರು ಮಾತ್ರ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ . ಕಳೆದ 15 ವರ್ಷದಿಂದ ಶಾಸಕರಾಗಿರುವ ಕುಮಾರಸ್ವಾಮಿಯವರಿಗೆ ಒಂದು ಸಣ್ಣ ಸಮಸ್ಯೆಯನ್ನು ಬಗೆಹರಿಸಲಾಗುತ್ತಿಲ್ಲ.
 ಜಿಲ್ಲಾ ಪಂಚಾಯಿತಿ  ಸದಸ್ಯರು, ತಾಲೂಕು ಪಂಚಾಯತಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಯಾರು ಸ್ಪಂದಿಸುತ್ತಿಲ್ಲ ಎಂದು ದೂರಿದರು.

 ಸುಮಾರು 60 ರಿಂದ 70 ಒಕ್ಕಲಿದ್ದು ಅದರಲ್ಲಿ ಎಸ್ ಸಿ ಎಸ್ ಟಿ ಹಾಗೂ ಜನರಲ್ ಜನಾಂಗದವರಿದ್ದು ಮಂಜುರಾದ  ರಸ್ತೆಯನ್ನು  ಬೇರೆಡೆಗೆ ವರ್ಗಾಯಿಸಿದ್ದಾರೆ.
 ಇದು ರಾಜಕೀಯ ಒತ್ತಡವು ಅಥವಾ ಅಧಿಕಾರಿಗಳ ಕುತಂತ್ರವು ತಿಳಿಯದು. ಮಳೆಗಾಲ ಬಂದರೆ ಈ ರಸ್ತೆಯಲ್ಲಿ ತಿರುಗಾಡುವುದೇ ಗ್ರಾಮಸ್ಥರಿಗೆ ನರಕಯಾತನೆಯಾಗುತ್ತದೆ ಎಂದರು.
ರೋಗಿಗಳನ್ನು  ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಮತ್ತು ಗರ್ಭಿಣಿ  ಮಹಿಳೆಯರನ್ನು ವೃದ್ಧರನ್ನು  ಈ ರಸ್ತೆಯಲ್ಲಿ ಕರೆದುಕೊಂಡು ಹೋಗುವುದೇ ಗ್ರಾಮಸ್ಥರಿಗೆ ದಿನನಿತ್ಯದ ಸವಾಲಾಗಿದೆ ಎಂದರು.
 ಸುಮಾರು 60 ರಿಂದ 70 ಮನೆಗಳಿದ್ದರೂ ಗ್ರಾಮಕ್ಕೆ  ರಸ್ತೆ ಮಾತ್ರ ಇಲ್ಲ ಮತ್ತು ಕುಡಿಯುವ ನೀರಿನ ವ್ಯವಸ್ಥೆಯು ಸಹ ಇಲ್ಲ. ದನ ಕರುಗಳನು ತೊಳೆಯುವ ನೀರನ್ನೇ ಕುಡಿಯುವ ಪರಿಸ್ಥಿತಿ ನಮ್ಮಲ್ಲಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಮಂಜುರಾದ ರಸ್ತೆಯನ್ನು  ಬೇರೆಡೆಗೆ ವರ್ಗಾಯಿಸಿದನ್ನು ಖಂಡಿಸಿ ರಸ್ತೆಯನ್ನು ಸ್ಥಳಕ್ಕೆ ಬಂದು ಪರಿಶೀಲಿಸಿ ಎಂದು   ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಡಾ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು