ಅಯೋಧ್ಯೆ ಹೋರಾಟದಂತೆ ಮುಂದೆ ಮಸೀದಿಯಲ್ಲಿ ಈಶ್ವರನಿಗಾಗಿ ಹೋರಾಟ : ಶಿವಪ್ರಸಾದ್ ಪಾಂಡೆಯ ಮಹಾರಾಜ್


ಹಾಸನ: ಈ ಹಿಂದೆ ಅಯೋಧ್ಯೆಗಾಗಿ ಸತತ ಹೋರಾಟ ಮಾಡಿದಂತೆ ಮುಂದಿನ ದಿನಗಳಲ್ಲಿ ಮಸೀದಿಯಲ್ಲಿ ಈಶ್ವರನಿಗಾಗಿ ಹೋರಾಟ ಮಾಡಲಾಗುವುದು ಎಂದು ಮೊದಲು ನ್ಯಾಯಾಲಯಕ್ಕೆ ದಾವೆ ಹೂಡಿ ಜಯಗಳಿಸಿದ ಗುರೂಜಿ ಶಿವಪ್ರಸಾದ್ ಪಾಂಡೆಯ ಮಹಾರಾಜ್ ಜಿ ಲಿಂಗಿಯಾ ಅವರು ಹಾಸನದಲ್ಲಿ ಹೇಳಿಕೆ ನೀಡಿದ್ದಾರೆ.

      ನಗರದ ಪಾರ್ಕ್ ರಸ್ತೆ ಬಳಿ ಇರುವ ಶ್ರೀಸೀತಾರಾಮಾಂಜನೇಯ ದೇವಸ್ಥಾನದ ಅವರಣದಲ್ಲಿ ೧೦ ರಾಜ್ಯಗಳು ಮತ್ತು ಎರಡು ದೇಶಗಳನ್ನು ಭೇಟಿ ಮಾಡಿ ಶ್ರೀಲಂಕಾಕ್ಕೆ ತೆರಳಲಿರುವ ಶ್ರೀರಾಮ ಪಾಗ್ ಯಾತ್ರೆ ಬೆಂಗಳೂರಿನ ಮೂಲಕ ಹಾಸನಕ್ಕೆ ಬಂದಾಗ ಅದ್ಧೂರಿ ಸ್ವಾಗತ ದೊರಕಿತು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜ್ಞನವ್ಯಾಪಿಯಲ್ಲಿ ಜಯಗಳಿಸಿರುವುದು ನಮ್ಮ ಜೀವಿತಾವಧಿಯಲ್ಲಿ ತುಂಬ ಖುಷಿ ತಂದಿದೆ. ನಮ್ಮ ಜೀವಿತಾವಧಿಯಲ್ಲಿ ಇದಕ್ಕಿಂತ ದೊಡ್ಡ ಸಂತಸ ಮತ್ತೊಂದಿಲ್ಲ. ಜ್ಞನವ್ಯಾಪಿ ಮಸೀದಿಯಲ್ಲಿ ಈಶ್ವರನಿಗಾಗಿ ನಮ್ಮ ಮುಂದಿನ ಹೋರಾಟ ಮುಂದುವರೆಯುವುದು ಎಂದು ಎಚ್ಚರಿಸಿದರು. ಆ ಸ್ಥಳದಲ್ಲಿ ಈಶ್ವರ ಲಿಂಗದ ಮೇಲೆ ನೀರಿನ ಫೌಂಟೆನ್ ಮಾಡಿ ಇರಿಸಿ ನೀರು ಹಾಕಿ ಮುಚ್ಚಿದ್ದಾರೆ. ಅದೇ ಸ್ಥಳಕ್ಕೆ ಉಗಿಯುತ್ತಾರೆ ಎಂದು ಬೇಸರವ್ಯಕ್ತಪಡಿಸಿದ ಅವರು, ಮುಂದೆ ಅಲ್ಲಿನ ಶಿವಲಿಂಗಕ್ಕಾಗಿ ಹೋರಾಟ ಮಾಡುತ್ತೇವೆ. ಜ್ಞನವ್ಯಾಪಿಯಲ್ಲೂ ಅಯೋಧ್ಯೆಯಂತೆ ಶಿವಲಿಂಗಕ್ಕಾಗಿ ಹೋರಾಟ ಮಾಡುತ್ತೇವೆ. ಅಯೋಧ್ಯೆ ಹೋರಾಟವೂ ಇದೆ ರೀತಿ ಪ್ರಾರಂಭವಾಗಿ ಜಯಗಳಿಸಿದೆ ಎಂದು ಹೇಳಿದರು. 

ರಾಮಜನ್ಮಭೂಮಿ ಅಯೋಧ್ಯೆಯಿಂದ ಶ್ರೀಲಂಕಾವರೆಗೆ, ರಾಮ್ ಬನ್ ಗಮನ್ ಯಾತ್ರೆ ಪ್ರಾರಂಭವಾಗಿ ಅಯೋಧ್ಯೆ ಮಣ್ಣಿನೊಂದಿಗೆ ೧೫೦೦೦ಕಿ.ಮೀ ಯಾತ್ರೆ ಹೊರಟಿರುವ ಮಹಾರಾಜ್ ಲಿಂಗಿಯಾ ಗುರುಗಳು. ಈ ವೇಳೆ ಹಾಸನಕ್ಕೆ ಭೇಟಿ ನೀಡಿರೋ ಲಿಂಗಿಯಾಶ್ರೀ. ಅಯೋಧ್ಯೆಯಿಂದ ಲಂಕೆವರೆಗೆ ಶ್ರೀ ರಾಮ ಕ್ರಮಿಸಿದ ಒಟ್ಟು ೨೦೦ ಸ್ಥಳಗಳ ಭೇಟಿ ನೀಡಿದ್ದು, ಈ ವೇಳೆ ಜ್ಙಾನವ್ಯಾಪಿ ವಿಚಾರದಲ್ಲಿ ಲಿಂಗಿಯಾ ಗುರೂಜಿ ಮಾತನಾಡಿದರು. 

       ಇದೆ ವೇಳೆ ಯಾತ್ರೆಯ ಮುಖ್ಯ ಆಯೋಜಕರು ಡಾ. ಸಚಿನ್ ಸನಾತನಿ ಜಿ ಮಾಧ್ಯಮದೊಂದಿಗೆ ಮಾತನಾಡಿ, ಇಂದು ೧೦ ರಾಜ್ಯಗಳು ಮತ್ತು ಎರಡು ದೇಶಗಳನ್ನು ಭೇಟಿ ಮಾಡಿ ಶ್ರೀಲಂಕಾಕ್ಕೆ ತೆರಳಲಿರುವ ಶ್ರೀರಾಮ ಪಾಗ್ ಯಾತ್ರೆ ಬೆಂಗಳೂರಿನ ಮೂಲಕ ಹಾಸನ ತಲುಪಿದೆ. ಕಾಶಿಯ ಸನಾತನಿ ಸಂಸ್ಥೆ ಬ್ರಹ್ಮರಾಷ್ಟ್ರ ಏಕಂ ಅಯೋಧ್ಯೆಯಲ್ಲಿ ಶ್ರೀರಾಮ ಲಾಲನ ಪ್ರತಿಷ್ಠಾಪನೆಯ ಸ್ಮರಣಾರ್ಥ ೪೫ ದಿನಗಳ ಶ್ರೀರಾಮ ಪಾಗ್ ಯಾತ್ರೆಯನ್ನು ಆಯೋಜಿಸುತ್ತಿದೆ. ಈ ೪೫ ದಿನಗಳ ಯಾತ್ರೆಯು ಶ್ರೀರಾಮನು ತನ್ನ ವನವಾಸದ ದಿನಗಳಲ್ಲಿ ಹೋದ ಎಲ್ಲಾ ಸ್ಥಳಗಳ ಮೂಲಕ ಹಾದುಹೋಗುತ್ತದೆ. ಈ ಯಾತ್ರೆಯು ಭಗವಾನ್ ರಾಮನ ಆದರ್ಶಗಳು ಮತ್ತು ಮೌಲ್ಯಗಳನ್ನು ಅದು ಹಾದುಹೋಗುವ ಎಲ್ಲಾ ಸ್ಥಳಗಳಲ್ಲಿ ಪ್ರಚಾರ ಮಾಡುತ್ತದೆ, ಇದರಿಂದ ನಾವು ವಿಶ್ವ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಬಹುದು ಎಂದರು. ದೇಶದಲ್ಲಿ ಏಕತೆ, ಸಮಗ್ರತೆ ಮತ್ತು ಸಮಾನತೆ ಕಾಪಾಡುವುದು ಇದರ ಉದ್ದೇಶವಾಗಿದೆ.

ಆಧುನಿಕ ಶಿಕ್ಷಣದೊಂದಿಗೆ ಸಾಂಪ್ರದಾಯಿಕ ಮೌಲ್ಯಗಳಲ್ಲಿ ಗುರುಕುಲವನ್ನು ನಿರ್ಮಿಸಲು ಮತ್ತು ಸ್ಥಾಪಿಸಲು ವಾರಣಾಸಿಯ ವಿಂಧ್ಯವಾಸಿನಿ ಧಾಮದಲ್ಲಿ 'ಶ್ರೀರಾಮ ವೈದಿಕ ಸಪ್ತಋಷಿ ಗುರುಕುಲ' ಹೆಸರಿನಲ್ಲಿ ನಮ್ಮ ಮುಂಬರುವ ಶೈಕ್ಷಣಿಕ ಯೋಜನೆಗೆ ಈ ಯಾತ್ರೆ ಸಮರ್ಪಿಸುತ್ತದೆ. ಗುರುಕುಲ ಪದ್ಧತಿಯು ಭಾರತದ ಪ್ರಾಚೀನ ಶಿಕ್ಷಣ ವ್ಯವಸ್ಥೆಗೆ ಅಮೂಲ್ಯವಾದ ಕೊಡುಗೆಯನ್ನು ಹೊಂದಿದೆ. ಬ್ರಹ್ಮ ರಾಷ್ಟ್ರ ಏಕಂ ಜಾಗತಿಕವಾಗಿ ಏಕೀಕೃತ ಮತ್ತು ಬಲಿಷ್ಠ ಭಾರತಕ್ಕಾಗಿ ಪ್ರಾಚೀನ ಸಾಂಸ್ಕöÈತಿಕ ಪರಂಪರೆಯಲ್ಲಿ ಬೇರೂರಿರುವ ಪ್ರಬಲ ನಾಯಕರನ್ನು ರೂಪಿಸುವ ಗುರಿ ಹೊಂದಿದೆ. ಶ್ರೀರಾಮ ಪಾಗ್ ಯಾತ್ರೆಯು ಇಂದು ಅಯೋಧ್ಯೆ, ಶೃಂಗವೇರಪುರ, ಪ್ರಯಾಗರಾಜ್, ಚಿತ್ರಕೂಟ, ಸತ್ನಾ (ಮ.ಪಂ.), ನಾಗ್ಪುರ, ನಾಸಿಕ್ ಮತ್ತು ಲೇಪಾಕ್ಷಿ ಮತ್ತು ಬೆಂಗಳೂರು ಮೂಲಕ ಹಾಸನ ತಲುಪಿದೆ. ಇಲ್ಲಿ ರಾಮ್ ಪಾಗ್ ಯಾತ್ರಿಗಳಿಗೆ ಭವ್ಯ ಸ್ವಾಗತ ನೀಡಿರುವುದಕ್ಕೆ ಸಂತೋಷವ್ಯಕ್ತಪಡಿಸಿದರು. ಯಾತ್ರೆಯಲ್ಲಿ ನೂರಾರು ರಾಮಭಕ್ತರು ಉಪಸ್ಥಿತರಿದ್ದರು.

     ಸನಾತನ ಧರ್ಮ ಪ್ರಚಾರದ ಜತೆಗೆ ನಾಡಿನ ಸಂಸ್ಕöÈತಿ, ಪರಂಪರೆ ಉಳಿಸುವ ಕೆಲಸ ಮಾಡುತ್ತಿರುವ ಈ ಸಂಸ್ಥೆಯಿಂದ ನಿರಂತರವಾಗಿ ಧಾರ್ಮಿಕ, ಸಾಂಸ್ಕöÈತಿಕ, ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಈ ಯಾತ್ರೆಯು ಸಂಪೂರ್ಣವಾಗಿ ಧಾರ್ಮಿಕವಾಗಿದೆ ಮತ್ತು ಭಗವಾನ್ ಶ್ರೀರಾಮನ ಮೇಲಿನ ನಂಬಿಕೆ ಮತ್ತು ಭಕ್ತಿಯ ಸಂಕೇತವಾಗಿದೆ ಮತ್ತು ಲಕ್ಷಾಂತರ ಭಕ್ತರು ಈ ಐತಿಹಾಸಿಕ ಯಾತ್ರೆಗೆ ಭಾರತದಾದ್ಯಂತ ಸ್ಥಳದಿಂದ ಸ್ಥಳಕ್ಕೆ ಸೇರುತ್ತಿದ್ದಾರೆ.

ನಮ್ಮೊಂದಿಗೆ ಯಾತ್ರೆಯ ಪ್ರತಿಜ್ಞೆ ಸ್ವೀಕರಿಸುವ ಜನರು ಮುಖ್ಯವಾಗಿ ಗೌರವಾನ್ವಿತ ಗುರು ಜಿ ಶ್ರೀ ದಿವಾಕರ್ ದ್ವಿವೇದಿ ಜಿ, ಆದಿ ವಿಶ್ವೇಶ್ವರ ಜ್ಯೋತಿರ್ಲಿಂಗದ ಮಹಂತ್ ಶ್ರೀಲಿಂಗ ಮಹಾರಾಜ್ ಜಿ, ಶ್ರೀಮತಿ ಪ್ರಿಯಾ ಮಿಶ್ರಾ, ಎಂಆರ್. .ಮೋಹನ್, ಬಾಲಾಜಿ, ದಿನೇಶ್, ಮಹೇಶ್, ರಘುನಂದನ್, ವ್ಯಾಂಕೆಟ್, ಪವನ್, ಅರುಣ್, ಜಿ.ಓ. ಮಹಾಂತಪ, ಮುಕ್ತುರಾಜ್, ಪೂಜೆ, ಶ್ರೀ. ಕುಶಾಗ್ರ ಮಿಶ್ರಾ ಮತ್ತು ಇನ್ನೂ ಅನೇಕರನ್ನು ಪ್ರಸ್ತುತಪಡಿಸಲಾಯಿತು. ಈ ಪ್ರಯಾಣವು ರಾಜಕೀಯವಲ್ಲ ಆದರೆ ಸ್ವಾಯತ್ತ ಮತ್ತು ಧಾರ್ಮಿಕ ವ್ಯವಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಯಾತ್ರೆಯ ನಿರ್ಣಯವು ರಾಷ್ಟ್ರವನ್ನು ಏಕತೆ, ಸಮಗ್ರತೆ ಮತ್ತು ಸಮಾನತೆಯ ಎಳೆಯಲ್ಲಿ ಬಂಧಿಸುವ ಪ್ರಯತ್ನವಾಗಿದೆ. ಎಲ್ಲಾ ಜಾತಿ, ವರ್ಗದ ಜನರನ್ನು ಬಂಧಿಸಲು ನಿರಂತರ ಪ್ರಯತ್ನ ನಡೆಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು. ಎಲ್ಲಾ ಸನಾತನಿಗಳು ಮತ್ತು ಶ್ರೀರಾಮನ ಭಕ್ತರು ಈ ಯಾತ್ರೆಗೆ ಸೇರಲು ಮತ್ತು ಅವರ ಸನಾತನ ಸಂಸ್ಕöÈತಿ ಮತ್ತು ಪರಂಪರೆಯನ್ನು ಉಳಿಸುವಲ್ಲಿ ಸಹಕರಿಸಲು ವಿನಂತಿಸಲಾಗಿದೆ, ಇದರಿಂದಾಗಿ ಭಾರತವು ಅತ್ಯುತ್ತಮ ಮತ್ತು ಶಕ್ತಿಯುತ ವಿಶ್ವ ನಾಯಕನಾಗಿ ಸ್ಥಾಪನೆಯಾಗುತ್ತದೆ ಎಂದು ಕರೆ ನೀಡಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು