ಎಂಸಿಇ ಕಾಲೇಜಿನಲ್ಲಿ ನ್ಯಾಷನಲ್ ಸಿಂಪೋಸಿಯಂ ನಾಲ್ಕು ದಿನದ ಕಾರ್ಯಾಗಾರಕ್ಕೆ ಚಾಲನೆ

 


ಹಾಸನ : ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ವಿಭಾಗದ ಹಾಗೂ ಐಇಇಇ ಕಾಮ್ಸಕ್ ಚಾಪ್ಟರ್ ಮತ್ತು ಸ್ಟೂಡೆಂಟ್ ಚಾಪ್ಟರ್ ವತಿಯಿಂದ ಮಂಗಳವಾರದಂದು ಬೆಳಿಗ್ಗೆ ಆಯೋಜಿಸಲಾಗಿದ್ದ ನ್ಯಾಷನಲ್ ಸಿಂಪೋಸಿಯಂ ನಾಲ್ಕು ದಿನದ ಕಾರ್ಯಾಗಾರ ಹಾಗೂ ಒಂದು ದಿನದ ಪ್ರಾಜೆಕ್ಟ್ ಎಕ್ಸೊಪೊ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಂಶುಪಾಲರಾದ ಡಾ. .ಜೆ. ಕೃಷ್ಣಯ್ಯ ಉದ್ಘಾಟಿಸಿದರು.

      ನಂತರ ಮಾತನಾಡಿದ ಅವರು, ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಉತ್ತೇಜನವನ್ನು ನೀಡುತ್ತವೆ ಹಾಗೂ ಕಾರ್ಯಕ್ರಮವು ಫಲಕಾರಿಯಾಗಲಿ ಎಂದರು. ಇಂದಿನ ತಾಂತ್ರಿಕ ಮತ್ತು ಸ್ಪರ್ದಾ ಯುಗದಲ್ಲಿ ಕಲಿಕೆ ಹೆಚ್ಚು ಇದ್ದು, ವಿದ್ಯಾರ್ಥಿಗಳು ಕೂಡ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು. 

    ಅಂಡ್ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಸಿ. ಶ್ರೀಕಾಂತ್ ಹಾಗೂ ಪ್ರವೀಮ್ ಸಾಫ್ಟ್ ವೇರ್ ಸಲ್ಯೂಶನ್ ಮೋಹಿತ್, ಸಂತೋಷ್, ಎಂ. ನವೀನ್ ಇತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜಿನ ಹಾಗೂ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಕಾರ್ಯಕ್ರಮದ ಆಯೋಜಕರಾದ ಡಾ. ತ್ರಿವೇಣಿ, ಡಾ. ಮೂರ್ತಿ ಮಹದೇವ ನಾಯಕ್, ಕಾಲೇಜಿನ ಸೂಪರ್ ಡೆಂಟ್ ಆದ ಶಿವಕುಮಾರಸ್ವಾಮಿಯವರು ಹಾಗೂ ಛಾಯಾಂಕ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಡಾ. ದೀಪಿಕಾ ರವರು ಹಾಗೂ ವಂದನಾರ್ಪಣೆಯನ್ನು ಸುಷ್ಮಾ ರವರು ನೆರವೇರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು